Saturday, May 9, 2009

ನೀ ಬಾರೋ ರವಿತೇಜ

ಮುಸುಕೆಳೆದು ಕಗ್ಗತ್ತಲೆಯ ಸರಿಸಿ

ನೀ ಬಾರೋ ರವಿತೇಜ

ಗಿಡ ಮರದ ಎಲೆಗಂಟಿ

ಸವಿ ಕನಸು ಕಾನುತಿರುವ

ಎಳೆ ಇಬ್ಬನಿಗೆ ಹೊಳಪು ನೀಡಲು,

ಕರಿಮೋಡದ ತೆರೆಯ ಸರಿಸಿ,

ದಿನದ ಹುಟ್ಟನ್ನು ಸೂಚಿಸುತ್ತ,

ಮೂಡಣದೀ ನೀ ಹುಟ್ಟಿ ಬಾರೋ ರವಿಯೇ,

ನಿನ್ನ ರಶ್ಮಿಯನ್ನು ಜಗದ್ದುದಕ್ಕೂ ಹರಡುತ್ತಾ,

ಮನು, ಪ್ರಾಣಿ ಸಂಕುಲಕ್ಕೆ

ನಿತ್ಯದ ಕರ್ತವ್ಯದ ಅರಿವು ಮೂಡಿಸಲು,

ಮನುವಿನ ಮನವ ಕಾಡುವ

ಯಾಂತ್ರಿಕತೆಯ ದಿಗಿಲು ಹೊಡಿಸಿ,

ದಿನದ ಹುಟ್ಟು, ಸಾವಿನಂತೆ

ಮನುವಿನಲ್ಲೂ ಹೊಸತನ,

ಹೊಸ ಕನಸು, ಆಸಯಗಳ

ಬಲೆ ಎಣೆಯ ಬಾರೋ ರವಿತೇಜ.

Thursday, May 7, 2009

ನನ್ನವನು

ಹೃದಯದೊಳಗೆ ಅವಿತ ನಿನ್ನ,
ಊರೆಲ್ಲ ಹುಡುಕಿ, ನೀ ಕಾಣದಾಗ,
ಡವಗುಡುವ ಎದೆಯನ್ನೊಮ್ಮೆ
ಮುಟ್ಟಿ ನೋಡಿದರೆ, ನೀ ಕಳ್ಳ
ನಗೆ ನಕ್ಕು ನನ್ನ ತಲೆ ಮೊಟಕಿದೆ!

ಕತ್ತಲು ಬೆತ್ತಲು

ಸುತ್ತ ಮುತ್ತಕ್ಕು ಕಡುಗತ್ತಲು,
ಬೆಳಕ ಕಿಂಡಿ ಕಾಣದಿರಲು ದಿಗಿಲು,
ಅವನ ನೆಪಗಳ ನೆನಪುಗಳ ಮಧ್ಯೆ
ನಾ ಕಳೆದು ಹೋಗಲು,ಅವ ಬಿಟ್ಟ
ಈ ಮನ ಕತ್ತಲಲ್ಲಿ ಬೆತ್ತಲು

ಮುದ್ದು ಪೆದ್ದು

ನನ್ನ ನಿದ್ದೆಯನ್ನೆಲ್ಲ ನೀ ಕದ್ದು,
ಈಗ ಮಲಗೆನ್ನುತಿರುವೆ
ಮಾಡದೆ ಸದ್ದು!

ನಿನಗೆ ನೀಡಲಾರದೆ ಮುದ್ದು,
ನಾ ಹೇಗೆ ಮಲಗಲೋ
ಪೆದ್ದು! ಪೆದ್ದು!

Friday, May 1, 2009

ಆದರೂ....... ಬೇಡ

ಇರುವೆ ಆದರೂ ಸರಿ
ಕ್ರಮಿಸಬಹುದು ಬಹುದೂರ,
ಆದರೆ ನಾವಾಗುವುದು ಬೇಡ
ತಾನೆ ಹೆಣೆದ ಬಲೆಯೊಳಗೆ
ಕುಳಿತು ಕಾಯುವ ಜೇಡ